ಚಿಕ್ಕಬಳ್ಳಾಪುರ
ಹನುಮ ಜಯಂತಿ ಹಿನ್ನೆಲೆ ಶುಕ್ರವಾರ ಜಿಲ್ಲಾದ್ಯಂತ ಆಂಜನೇಯಸ್ವಾಮಿ ಸೇರಿದಂತೆ ದೇಗುಲಗಳಲ್ಲಿವಿಶೇಷ ಪೂಜೆ ನೆರವೇರಿತು. ಬೆಳಗ್ಗೆಯಿಂದ ಸಾವಿರಾರು ಭಕ್ತರು ದೇಗುಲಗಳಲ್ಲಿಸರದಿ ಸಾಲಿನಲ್ಲಿನಿಂತು ಆಂಜನೇಯನ ದರ್ಶನ ಪಡೆದರು.
ನಗರ ಹೊರವಲಯದ ಶ್ರೀವೀರಾಂಜನೇಯ ಸ್ವಾಮಿ ದೇವಾಲಯದಲ್ಲಿಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಹನುಮ ಜಯಂತಿ ಅಂಗವಾಗಿ ವಿಶೇಷ ಹೋಮ, ಅಭಿಷೇಕಗಳನ್ನು ನಡೆಸಿಕೊಟ್ಟರು.
ಬೆಳಗ್ಗೆಯೇ ಆರಂಭವಾದ ವಿಶೇಷ ಹೋಮ ಹವನದಲ್ಲಿಭಾಗಿಯಾದ ಚುಂಚಶ್ರೀ ಹೋಮ, ಅಭಿಷೇಕ ಮತ್ತು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿಆಗಮಿಸಿದ ಭಕ್ತರು ಹೋಮ, ಹವನದಲ್ಲಿಭಾಗಿಯಾಗಿ ಭಕ್ತಿಪರವಶರಾದರು. ಹಲವು ಗಣ್ಯರು ಹೋಮ-ಹವನದಲ್ಲಿಭಾಗವಹಿಸಿ ಪ್ರಾರ್ಥಿಸಿದರು.
ಪೂಜಾ ಕಾರ್ಯಕ್ರಮದಲ್ಲಿಆದಿಚುಂಚನಗಿರಿ ಶಾಖಾ ಮಠಗಳ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ ಹಾಗೂ ಶ್ರೀಮಠದ ಸದ್ಭಕ್ತರು ಭಾಗವಹಿಸಿ ಭಗವಂತನ ಹಾಗೂ ಪರಮಪೂಜ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದರು.
ಜಿಲ್ಲೆಯ ಎಲ್ಲತಾಲೂಕುಗಳಲ್ಲೂಹನುಮ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು. ಕೆಲವೆಡೆ ಹನುಮನ ವಿಗ್ರಹಗಳ ಮೆರವಣಿಗೆಯೂ ನಡೆಯಿತು. ಅನ್ನಸಂತರ್ಪಣೆ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನಗರ ಹೊರವಲಯದ ಶ್ರೀವೀರಾಂಜನೇಯ ಸ್ವಾಮಿ ದೇವಾಲಯದಲ್ಲಿಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಿದರು.