Kannada News Channel
Advertisement
  • ರಾಜ್ಯ
  • ರಾಜಕೀಯ
  • ವಿದೇಶ
  • ಆರೋಗ್ಯ
  • ಕರ್ನಾಟಕ
  • ಕ್ರೀಡೆ
  • ಚರ್ಚೆ
  • ಪ್ರಮುಖ ಸುದ್ದಿ
  • ವಿಡಿಯೋ
  • ವೈರಲ್
  • ಸಿನಿಮಾ
No Result
View All Result
  • ರಾಜ್ಯ
  • ರಾಜಕೀಯ
  • ವಿದೇಶ
  • ಆರೋಗ್ಯ
  • ಕರ್ನಾಟಕ
  • ಕ್ರೀಡೆ
  • ಚರ್ಚೆ
  • ಪ್ರಮುಖ ಸುದ್ದಿ
  • ವಿಡಿಯೋ
  • ವೈರಲ್
  • ಸಿನಿಮಾ
The News Stall Logo
No Result
View All Result
Home ಕ್ರೀಡೆ

ನಾನೇ ಶಂಕುಸ್ಥಾಪನೆ ಮಾಡಿ ನನ್ನಿಂದಲೇ ಉದ್ಘಾಟನೆಯಾದ ಯೋಜನೆ

ನಾನೇ ಶಂಕುಸ್ಥಾಪನೆ ಮಾಡಿ ನನ್ನಿಂದಲೇ ಉದ್ಘಾಟನೆಯಾದ ಯೋಜನೆ

ಮಹತ್ವಾಕಾಂಕ್ಷಿ “ಕಾವೇರಿ ಐದನೇ ಹಂತದ ಯೋಜನೆ” ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ನುಡಿದಂತೆ ನಡೆದದ್ದಕ್ಕೆ ಮತ್ತೊಂದು ಸಾಕ್ಷಿ ನಿಮ್ಮ ಮುಂದಿದೆ: ಸಿಎಂ ಸಿದ್ದರಾಮಯ್ಯ

ಕುಮಾರಸ್ವಾಮಿ ಮೇಕೆದಾಟುಗೆ ಅನುಮತಿ ಕೊಡಿಸುತ್ತಿಲ್ಲ ಏಕೆ: ಸಿಎಂ ಪ್ರಶ್ನೆ

ರಾಜ್ಯಕ್ಕೆ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಹೆಚ್ ಡಿ ಕೆ, ಬಿಜೆಪಿ ಸಂಸದರು ಏಕೆ ಧ್ವನಿ ಎತ್ತುತ್ತಿಲ್ಲ: ಸಿಎಂ ಪ್ರಶ್ನೆ

ಬೆಂಗಳೂರು

ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ನಾನೇ ಶಂಕುಸ್ಥಾಪನೆ ಮಾಡಿ ನನ್ನಿಂದಲೇ ಉದ್ಘಾಟನೆಯಾಗಿದೆ. ನುಡಿದಂತೆ ನಡೆದದ್ದಕ್ಕೆ ಮತ್ತೊಂದು ಸಾಕ್ಷಿ ನಿಮ್ಮ ಮುಂದಿದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

BBMP ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮತ್ತು ಹಿಂದಿನ ಸರ್ಕಾರಗಳು ಅಗತ್ಯ ಹಣ ಬಿಡುಗಡೆ ಮಾಡದೆ ನಿರಾಸಕ್ತಿ ವಹಿದಿದ್ದರಿಂದ ಯೋಜನೆ ನಿಧಾನವಾಯಿತು. ಮತ್ತೆ ನಾವು ಅಧಿಕಾರಕ್ಕೆ ಬಂದು ಯೋಜನೆ ಲೋಕಾರ್ಪಣೆಗೊಳಿಸಿ 110 ಹಳ್ಳಿಗಳಿಗೆ ನೀರನ್ನು ಒದಗಿಸಿದ್ದೇವೆ.

ಆರನೇ ಹಂತದ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಸುಳ್ಳು ಹೇಳಿ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬಂದು ಸುಳ್ಳು ಹೇಳದೆ ನುಡಿದಂತೆ ನಡೆದು ಜನರ ಕೆಲಸ ಮಾಡಿ ತೋರಿಸಿದ್ದೇವೆ ಎಂದರು.

ಮೇಕೆದಾಟು ಯೋಜನೆಗೆ ಹೆಚ್ ಡಿ ಕೆ ಯಾಕೆ ಅನುಮತಿ ಕೊಡಿಸುತ್ತಿಲ್ಲ?

ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ತೆರಿಗೆಯಲ್ಲಿ ನಮಗೆ ಅನ್ಯಾಯ ಆಗಿದೆ. ಕೇಂದ್ರ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ತೆರಿಗೆ ಪಾಲಿನಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶಕ್ಕೆ ಬಹುಪಾಲು ಹೋಗಿ ರಾಜ್ಯಕ್ಕೆ ಅನ್ಯಾಯ ಮಾಡಿ ಮಲತಾಯಿ ಧೋರಣೆ ತೋರಿದೆ.

ಮೇಕೆದಾಟು ಯೋಜನೆಗೆ ಅನುಮತಿ ಕೊಡಿ ಎಂದು ಕೇಳುತ್ಯಲೇ ಇದ್ದೇವೆ. ಮಹದಾಯಿಗೂ ಅನುಮತಿ ಕೇಳಿದ್ದೇವೆ. ಕೇಂದ್ರ ಸರ್ಕಾರ ಅನುಮತಿ ಕೊಡದೆ ಅನ್ಯಾಯ ಮಾಡುತ್ತಿದೆ. ಹೆಚ್ ಡಿ ಕುಮಾರಸ್ವಾಮಿ ಯಾಕೆ ಅನುಮತಿ ಕೊಡಿಸುತ್ತಿಲ್ಲ? ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿಯ ಸಂಸದರು ಏಕೆ ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ. ಕರ್ನಾಟಕ ರಾಜ್ಯಕ್ಕೆ ಏಕೆ ಮಲತಾಯಿ ಧೋರಣೆ ಎಂದು ಕೇಂದ್ರ ಸರ್ಕಾರವನ್ನು ಇವರ್ಯಾರೂ ಪ್ರಶ್ನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷ 4 ಲಕ್ಷ ಕೋಟಿಗೂ ಅಧಿಕ ತೆರಿಗೆ ಕೇಂದ್ರಕ್ಕೆ ಕೊಡ್ತಾ ಇದ್ದೀವಿ. ಆದರೆ ವಾಪಾಸ್ ನಮಗೆ ಬರುತ್ತಿರುವುದು 60ಸಾವಿರ ಕೋಟಿ ಮಾತ್ರ. 100 ಪೈಸೆಗೆ 15 ಪೈಸೆ ಮಾತ್ರ ವಾಪಾಸ್ ಬರುತ್ತಿದೆ. ಇದು ಅನ್ಯಾಯ ಅಲ್ವಾ? ಏಕೆ ಬಿಜೆಪಿ ಸಂಸದರು ಪ್ರಶ್ನಿಸುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಈ ವೇಗಕ್ಕೆ ತಕ್ಕಂತೆ ಮೂಲಭೂತ ಸವಲತ್ತು ಒದಗಿಸುವ ಸವಾಲನ್ನು ನಮ್ಮ ಸರ್ಕಾರ ಸ್ವೀಕರಿಸಿ ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದು ಭರವಸೆ ನೀಡಿದರು.

ಕಾವೇರಿ ಕುಡಿಯುವ ನೀರಿನ ಆರನೇ ಹಂತದ ಯೋಜನೆಯಿಂದ 500 MLD ಕುಡಿಯುವ ನೀರು ಬೆಂಗಳೂರಿಗರಿಗೆ ಸಿಗತ್ತೆ. ಇದನ್ನೂ ನಾವು ಘೋಷಿಸಿದ್ದೀವಿ. ನಾವು ಇದನ್ನೂ ಮಾಡಿ ತೋರಿಸ್ತೀವಿ ಎಂದರು.

ಶಾಸಕರಾದ ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ, ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಶಾಸಕರಾದ ಎಸ್.ಆರ್. ವಿಶ್ವನಾಥ್ , ವಿಧಾನಸಭೆ, ವಿಧಾನಪರಿಷತ್ ಶಾಸಕರುಗಳಾದ ಟಿ.ಎಂ.ನಾಗರಾಜು, ರವಿ, ದಿನೇಶ್ ಗೂಳಿಗೌಡ, ಸುದಾಮ್ ದಾಸ್, ಮಾದೇಗೌಡರು, ನಾಗರಾಜ್ ಯಾದವ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತುಂಬಿದ ಕೊಡಗಳ ನೀರನ್ನು ಮುಖ್ಯಮಂತ್ರಿಗಳು ಕಾವೇರಿ ಮಾತೆಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಜೈಕಾ ಪ್ರತಿನಿಧಿಗಳು, ಸಚಿವರುಗಳು,ಶಾಸಕರುಗಳು, ಚುನಾಯಿತ ಪ್ರತಿನಿಧಿಗಳು,ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.

ಜೈಕಾ(ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4336 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆ ಇದಾಗಿದೆ.

ಲೋಕಾರ್ಪಣೆಗೊಳಿಸಿದ ನೆನಪಿಗಾಗಿ ಮುಖ್ಯಮಂತ್ರಿಗಳು,ಉಪಮುಖ್ಯಮಂತ್ರಿಗಳ ಜೊತಗೂಡಿ ಘಟಕದ ಆವರಣದಲ್ಲಿ ಸಸಿ ನೆಟ್ಟರು.

Previous Post

ನನಗೆ ಅಧಿಕಾರಿಯೂ ಹೆದರಬೇಕಿಲ್ಲ, ನಾನೂ ಅವರಿಗೆ ಹೆದರಲ್ಲ

Next Post

ಕಾಂಗ್ರೆಸ್ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ

Related Posts

ಫೆ.8ಕ್ಕೆ ಭಾರತ-ಶ್ರೀಲಂಕಾ ಕ್ರಿಕೆಟ್‌ ದಿಗ್ಗಜರ ನಡುವೆ ಪಂದ್ಯ
ಕ್ರೀಡೆ

ಫೆ.8ಕ್ಕೆ ಭಾರತ-ಶ್ರೀಲಂಕಾ ಕ್ರಿಕೆಟ್‌ ದಿಗ್ಗಜರ ನಡುವೆ ಪಂದ್ಯ

February 6, 2025
lic jeevan sakhi
ಕ್ರೀಡೆ

ಎಲ್‌ಐಸಿ ಬಿಮಾ ಸಖಿ ಯೋಜನೆ

December 13, 2024
ವಿಶ್ವ ರೇಬೀಸ್ ದಿನವನ್ನು ಏಕೆ ಆಚರಣೆ ಮಾಡಲಾಗುತ್ತದೆ? ಈ ದಿನದ ಇತಿಹಾಸ ಇಲ್ಲಿದೆ
ಕ್ರೀಡೆ

ವಿಶ್ವ ರೇಬೀಸ್ ದಿನವನ್ನು ಏಕೆ ಆಚರಣೆ ಮಾಡಲಾಗುತ್ತದೆ? ಈ ದಿನದ ಇತಿಹಾಸ ಇಲ್ಲಿದೆ

September 30, 2024
ಕ್ರೀಡೆ

ಅರ್ಕಾವತಿಗೆ ಸಂಬಂಧಿಸಿದ ರಾಜ್ಯಪಾಲರ ಪತ್ರ- ಪರಿಶೀಲಿಸಿ ಕ್ರಮ

September 28, 2024
ಕ್ಷುಲ್ಲಕ ವಿಚಾರಗಳ ಬಗ್ಗೆ  ಉತ್ತರ ಕೋರಿ  ರಾಜ್ಯಪಾಲರ ಪತ್ರ
ಕರ್ನಾಟಕ

ಕ್ಷುಲ್ಲಕ ವಿಚಾರಗಳ ಬಗ್ಗೆ ಉತ್ತರ ಕೋರಿ ರಾಜ್ಯಪಾಲರ ಪತ್ರ

September 28, 2024
ಅ.2 ರಂದು ರಾಜ್ಯಾದ್ಯಂತ ಗಾಂಧಿ ನಡಿಗೆ: ಡಿಸಿಎಂ ಡಿ.ಕೆ. ಶಿವಕುಮಾರ್
ಕ್ರೀಡೆ

ಅ.2 ರಂದು ರಾಜ್ಯಾದ್ಯಂತ ಗಾಂಧಿ ನಡಿಗೆ: ಡಿಸಿಎಂ ಡಿ.ಕೆ. ಶಿವಕುಮಾರ್

September 29, 2024
Load More
Next Post
ಕಾಂಗ್ರೆಸ್ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ

ಕಾಂಗ್ರೆಸ್ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ

Stay Connected test

  • 23.9k Followers
  • 99 Subscribers
  • Trending
  • Comments
  • Latest
ನಾನೇ ಶಂಕುಸ್ಥಾಪನೆ ಮಾಡಿ ನನ್ನಿಂದಲೇ ಉದ್ಘಾಟನೆಯಾದ ಯೋಜನೆ

ನಾನೇ ಶಂಕುಸ್ಥಾಪನೆ ಮಾಡಿ ನನ್ನಿಂದಲೇ ಉದ್ಘಾಟನೆಯಾದ ಯೋಜನೆ

October 16, 2024
ಕೆಟ್ಟ ಮನಸ್ಥಿತಿಯ ಜಿಲ್ಲಾ ಉಸ್ತುವಾರಿ ಸಚಿವರ ಜತೆ ವೇದಿಕೆ ಹಂಚಿಕೊಳ್ಳಲ್ಲ

ಕೆಟ್ಟ ಮನಸ್ಥಿತಿಯ ಜಿಲ್ಲಾ ಉಸ್ತುವಾರಿ ಸಚಿವರ ಜತೆ ವೇದಿಕೆ ಹಂಚಿಕೊಳ್ಳಲ್ಲ

October 6, 2024
110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರಿನ ಕಾಮಗಾರಿ ಬೇಗ ಮುಗಿಸಿ ಆದರೆ ಗುಣಮಟ್ಟ ಮರೆಯಬೇಡಿ

110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರಿನ ಕಾಮಗಾರಿ ಬೇಗ ಮುಗಿಸಿ ಆದರೆ ಗುಣಮಟ್ಟ ಮರೆಯಬೇಡಿ

September 28, 2024
ಎಡಿಜಿಪಿ ಚಂದ್ರಶೇಖರ್ ವಿರುದ್ಧ ಜೆಡಿಎಸ್ ದೂರು

0

ಅಪಘಾತಕ್ಕೊಳಗಾದವರ ಜೀವ ಉಳಿಸುವಲ್ಲಿ ಸಹಕಾರಿ : ಮುಖ್ಯಮಂತ್ರಿ ಸಿದ್ದರಾಮಯ್ಯ

0

ಅರ್ಕಾವತಿಗೆ ಸಂಬಂಧಿಸಿದ ರಾಜ್ಯಪಾಲರ ಪತ್ರ- ಪರಿಶೀಲಿಸಿ ಕ್ರಮ

0
ಕ್ಷುಲ್ಲಕ ವಿಚಾರಗಳ ಬಗ್ಗೆ  ಉತ್ತರ ಕೋರಿ  ರಾಜ್ಯಪಾಲರ ಪತ್ರ

ಕ್ಷುಲ್ಲಕ ವಿಚಾರಗಳ ಬಗ್ಗೆ ಉತ್ತರ ಕೋರಿ ರಾಜ್ಯಪಾಲರ ಪತ್ರ

0
ಫೆ.8ಕ್ಕೆ ಭಾರತ-ಶ್ರೀಲಂಕಾ ಕ್ರಿಕೆಟ್‌ ದಿಗ್ಗಜರ ನಡುವೆ ಪಂದ್ಯ

ಫೆ.8ಕ್ಕೆ ಭಾರತ-ಶ್ರೀಲಂಕಾ ಕ್ರಿಕೆಟ್‌ ದಿಗ್ಗಜರ ನಡುವೆ ಪಂದ್ಯ

February 6, 2025
ಬಿ.ವೈ.ವಿಜಯೇಂದ್ರ 150 ಕೋಟಿ ರೂ.ಆಮಿಷ

ಬಿ.ವೈ.ವಿಜಯೇಂದ್ರ 150 ಕೋಟಿ ರೂ.ಆಮಿಷ

December 14, 2024
lic jeevan sakhi

ಎಲ್‌ಐಸಿ ಬಿಮಾ ಸಖಿ ಯೋಜನೆ

December 13, 2024
ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಿರಿಧಾನ್ಯ ಸಹಕಾರಿ

ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಿರಿಧಾನ್ಯ ಸಹಕಾರಿ

December 13, 2024

Recent News

The News Stall

Kannada News Channel

The News Stall.com is unique news website, youtube channel. It will gives special information about the current affairs. The news channel regularly brings the major news, happenings and interesting facts in simple manner. We will simplify it and present it before you with the true spirit of Journalism.

Follow Us

Browse by Category

  • ಕರ್ನಾಟಕ
  • ಕ್ರೀಡೆ
  • ಪ್ರಮುಖ ಸುದ್ದಿ
  • ರಾಜಕೀಯ
  • ರಾಜ್ಯ
  • ವೈರಲ್

Recent News

ಫೆ.8ಕ್ಕೆ ಭಾರತ-ಶ್ರೀಲಂಕಾ ಕ್ರಿಕೆಟ್‌ ದಿಗ್ಗಜರ ನಡುವೆ ಪಂದ್ಯ

ಫೆ.8ಕ್ಕೆ ಭಾರತ-ಶ್ರೀಲಂಕಾ ಕ್ರಿಕೆಟ್‌ ದಿಗ್ಗಜರ ನಡುವೆ ಪಂದ್ಯ

February 6, 2025
ಬಿ.ವೈ.ವಿಜಯೇಂದ್ರ 150 ಕೋಟಿ ರೂ.ಆಮಿಷ

ಬಿ.ವೈ.ವಿಜಯೇಂದ್ರ 150 ಕೋಟಿ ರೂ.ಆಮಿಷ

December 14, 2024
lic jeevan sakhi

ಎಲ್‌ಐಸಿ ಬಿಮಾ ಸಖಿ ಯೋಜನೆ

December 13, 2024

© 2024 The News Stall All Rights Reserved

No Result
View All Result
  • ವಿಡಿಯೋ
  • ಚರ್ಚೆ
  • ವೈರಲ್
  • ಕ್ರೀಡೆ
  • ಮುಖಪುಟ
  • ರಾಜ್ಯ

© 2024 The News Stall All Rights Reserved

WhatsApp us