ಚಿಕ್ಕಬಳ್ಳಾಪುರ
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಎಂ.ಜಿ.ರಸ್ತೆ ಬದಿಯ ಕಟ್ಟಡಗಳನ್ನು ತೆರವುಗೊಳಿಸುತ್ತಿರುವುದು ಸ್ವಾಗತಾರ್ಹ. ಆದರೆ ವಿನಾಕಾರಣ ತೆರವಿನ ಬಗ್ಗೆ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಜಾಗವನ್ನು ಮಾತ್ರ ತೆರವುಗೊಳಿಸಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಂ.ಪ್ರಕಾಶ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ನಗರದ ಅಭಿವೃದ್ದಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ರಸ್ತೆಯನ್ನು ಅಭಿವೃದ್ದಿ ಪಡಿಸಿ ನಗರವನ್ನು ಉಳಿಸಿ. ವಿನಾಕಾರಣ ದಿನಕ್ಕೊಂದು ಸಂದೇಶಗಳನ್ನು ಕೊಟ್ಟು ಗೊಂದಲಕ್ಕಿಡುಮಾಡಬೇಡಿ ಎಂದು ಹೇಳಿದರು.
ಬಸ್ನಿಲ್ದಾಣ ನಗರಸಭೆಗೆ ಸೇರಿದ್ದು, ಚೆನ್ನಯ್ಯಪಾರ್ಕ್ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸದಂತೆ ಸುಪ್ರೀಂಕೋರ್ಟ್ ಹೇಳಿದೆ. ಇಂತಹ ಸಮಯದಲ್ಲಿ ಜನಸಾಮಾನ್ಯರಿಗೆ ಯಾವುದೇ ಪರಿಹಾರ ನೀಡದೆ ಮನಸೋ ಇಚ್ಚೆ ತೆರವುಗೊಳಿಸಿ ಅವರನ್ನು ಬೀದಿಗೆ ಹಾಕುವ ಕೆಲಸ ಮಾಡಬೇಡಿ. ಹೀಗಾಗಿ ನ್ಯಾಯಯುತವಾಗಿ ತೆರವು ಕಾರ್ಯ ನಡೆಸಲು ಸಭೆಯೊಂದನ್ನು ಕರೆದು ತೀರ್ಮಾನಿಸಿ ಎಂದು ಅವರು ಆಗ್ರಹಿಸಿದರು.
ಸರ್ ಎಂ.ವಿ. ಶಾಲೆ ಬಳಿ ಮೂರು ಅಡಿ ಜಾಗ ಹೋದ್ರೆ ಅಲ್ಲಿಸುಮಾರು 1 ಎಕರೆ ಪ್ರದೇಶ ಹೋಗುತ್ತೆ. ಆದರಿಂದ ಈ ಭಾಗದಲ್ಲಿಇಷ್ಟೊಂದು ಅನ್ಯಾಯ ಆಗುತ್ತಿದೆ. ಆದರಿಂದ ರಸ್ತೆ ಮಾಡಲು ಎಷ್ಟು ಅವಶ್ಯಕತೆ ಇದೆಯೋ ಅಷ್ಟಕ್ಕೇ ರಸ್ತೆಯನ್ನು ನಿರ್ಮಣ ಮಾಡಿ. ವಿನಾಕಾರಣ ಎಲ್ಲರಿಗೂ ತೊಂದರೆಕೊಡಬೇಡಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿಪ್ರಕಾಶ…, ಮಂಜುನಾಥ…, ರಾಜೇಶ…, ಪರಶಿವಮೂರ್ತಿ ಸೇರಿದಂತೆ ಹಲವರಿದ್ದರು.
