ಸೆಪ್ಟಂಬರ್ 21 ರಂದು ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ ಅವರು ಕೂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟಂಬರ್ 23ಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಸೆಪ್ಟಂಬರ್ 23 ರಂದು ವಿಚಾರಣೆ ಸೆಪ್ಟಂಬರ್ 27 ಅಂದರೆ ಇಂದಿಗೆ ಮುಂದೂಡಿಕೆಯಾಗಿತ್ತು.
ಇಂದು ಬೆಂಗಳೂರಿನ ಸೇಷನ್ಸ್ ಕೋರ್ಟ್ ನಲ್ಲಿ ನಟ ದರ್ಶನ್ ಅವರು ಸಲ್ಲಿಸಿದ್ದಂತಹ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ಕೈಗೆತ್ತಿಕೊಂಡರು. ಈ ವೇಳೆ ಸರ್ಕಾರದ ಪರವಾದ ವಕೀಲರಾದ ಪ್ರಸನ್ನಕುಮಾರ್ ಅವರು ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಹೀಗಾಗಿ ದರ್ಶನ್ ಪರ ವಾದ ಮಂಡನೆಗೆ ದರ್ಶನ್ ಪರ ವಕೀಲರಾದ ಸುನಿಲ್ ಕಾಲಾವಕಾಶ ಕೋರಿದರು. ಅದರಂತೆ ಅವರ ಮನವಿಯನ್ನು ಪುರಸ್ಕರಿಸಿ ಕೋರ್ಟ್ ಸೆಪ್ಟೆಂಬರ್ 30 ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿದೆ.
ಇನ್ನು ದರ್ಶನ್ ಅವರಿಗೆ ಇಂದು ಬೇಲ್ ಆಗುತ್ತೆ ಅಂತಾ ಅವರ ಅಭಿಮಾನಿಗಳು ಅಂದುಕೊಂಡಿದ್ದರು. ಅಲ್ಲದೇ ದರ್ಶನ್ ಅವರು ರಿಲೀಸ್ ಆದರೆ ಅವರನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆ ತರಲು ಹೆಲಿಕಾಫ್ಟರ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂಬ ಗಾಸಿಪ್ ಎದ್ದಿತ್ತು. ಇದೀಗ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆಯಾಗಿದ್ದು, ಹೆಲಿಕಾಫ್ಟರ್ ವ್ಯವಸ್ಥೆ ಮಾಡಿಕೊಂಡವರು ಪೇಚು ಮೊರೆ ಹಾಕುವಂತಾಗಿದೆ.
ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರ ಗೌಡ ಅವರು ಕೂಡ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದು ಅವರ ಜಾಮೀನು ಅರ್ಜಿಯ ವಿಚಾರಣೆ ಇಂದಿಗೆ ಮುಂದೂಡಿಕೆಯಾಗಿತ್ತು. ಇಂದು ಅವರ ಜಾಮೀನು ಅರ್ಜಿಯನ್ನು ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಪವಿತ್ರ ಗೌಡ ಜಾಮೀನು ಅರ್ಜಿಯ ವಿಚಾರಣೆ ಕೂಡ ಸೆಪ್ಟಂಬರ್ 30 ರಂದು ನಡೆಯಲಿದೆ. ಇಬ್ಬರ ಜಾಮೀನು ಅರ್ಜಿಯ ವಿಚಾರಣೆ ಕೂಡ ಮತ್ತೆ ಮುಂದೂಡಿಕೆಯಾಗಿದ್ದು ಅಂದಾದರೂ ಜಾಮೀನು ಸಿಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ರೇಣುಕಾಸ್ವಾಮಿ ಕೇಸ್ ನಲ್ಲಿ ಮೂವರು ಆರೋಪಿಗಳಿಗೆ ಜಾಮೀನು; ಬೇಲ್ ಸಿಕ್ರೂ ಇನ್ನೂ ಜೈಲಿನಲ್ಲಿದ್ದಾರೆ ಆರೋಪಿಗಳು
ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಪು ಜೈಲು ಸೇರಿ ಬರೋಬ್ಬರಿ ಮೂರು ತಿಂಗಳಾಯಿತು. ಹೀಗುರುವಾಗಲೇ ಮೊನ್ನೆ ಪ್ರಕರಣದ ಮೂವರು ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿತ್ತು. ಪ್ರಕರಣದ ಎ15, ಎ16, ಎ17 ಆರೋಪಿಗೆ ಜಾಮೀನು ಮಂಜೂರಾಗಿತ್ತು. ಆದರೆ ಜಾಮೀನು ಮಂಜೂರಾದ್ರೂ ಇನ್ನೂ ಈ ಮೂವರು ಆರೋಪಿಗಳು ಜೈಲಿನಲ್ಲೇ ಇರುವಂತಾಗಿದೆ.
ಹೌದು.. ಪ್ರಕರಣದ ಎ15 ನಿಖಿಲ್ ನಾಯಕ್, ಎ 17 ಕಾರ್ತಿಕ್ ಗೆ 57ನೇ ಸಿಸಿಹೆಚ್ ಕೋರ್ಟ್ ಮೊನ್ನೆ ಬೇಲ್ ಮಂಜೂರು ಮಾಡಿತ್ತು. ಎ 16 ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಬೇಲ್ ಸಿಕ್ಕಿ ಮೂರು ದಿನಗಳಾದ್ರೂ ಇನ್ನು ಕೂಡ ಆರೋಪಿಗಳು ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ. ಮೊನ್ನೆ ಜಾಮೀನು ಪಡೆದ ಈ ಮೂವರು ಆರೋಪಿಗಳು ತುಮಕೂರು ಜೈಲಿನಲ್ಲಿದ್ದಾರೆ. ಆದರೆ ಜಾಮೀನು ನೀಡುವ ವೇಳೆ ಇವರಿಗೆ ಕೋರ್ಟ್ ಷ್ಯೂರಿಟಿ ಕೇಳಿದೆ. ಆದರೆ ಷ್ಯೂರಿಟಿ ನೀಡಲು ಸಾಧ್ಯವಾಗದೇ ಇರೋದರಿಂದ ಆರೋಪಿಗಳು ಸದ್ಯ ಜೈಲಿನಲ್ಲೇ ಇದ್ದಾರೆ.
ಯಾರಾದರು ಷ್ಯೂರಿಟಿ ನೀಡಿದ ಬಳಿಕ ಕೋರ್ಟ್ ಆದೇಶ ಬಂದ ನಂತರವಷ್ಟೇ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಬೇಕಿದೆ. ಅಲ್ಲಿಯವರೆಗೂ ಜಾಮೀನು ಸಿಕ್ರೂ ಮೂವರಿಗೂ ಜೈಲೇ ಗತಿ ಎಂಬಂತಾಗಿದೆ.